ಶ್ರೀ ಶಂಕರ ಆಧ್ಯಾತ್ಮಿಕ ಕನ್ನಡ,ತಮಿಳು ಮೂಲದ ಖಾಸಗಿ ವಲಯದ ಕಿರುತೆರೆ ವಾಹಿನಿ( ), ರಾಷ್ಟ್ರೀಯ ಪ್ರಸಾರ ಅಧ್ಯಾತ್ಮಿಕ ವಿಷಯಗಳನ್ನು ಭಾರತದ ಹಲವಾರು ಭಾಷೆಗಳ ಮೂಲಕ ಸತತವಾಗಿ ೮ ವರ್ಷಗಳಿಂದ ಪ್ರಸಾರಮಾಡಿಕೊಂಡು ಬರುತ್ತಿದೆ. ದೇವರನಾಮಗಳು, ಭಜನೆ, ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಸಂದರ್ಶನ, ವಿಚಾರ ಸಂಕಿರಣಗಳ ಪ್ರಸಾರಗಳಲ್ಲದೆ, ಧಾರ್ಮಿಕ ಸ್ಥಾನಗಳಲ್ಲಿ ಜರುಗುವ ರಥೋತ್ಸವ, ದೇವತಾಕಾರ್ಯಗಳು, ಮೊದಲಾದವುಗಳ ನೇರಪ್ರಸಾರದ ವ್ಯವಸ್ಥೆಗಳನ್ನೂ ಸಮರ್ಪಕವಾಗಿ ಮಾಡಲಾಗುತ್ತಿದೆ. ಈಗ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಪ್ರಸಾರಕಾರ್ಯ ಭರದಿಂದ ಮುಂದುವರೆಯುತ್ತಿದೆ. ೨೧ ಡಿಸಂಬರ್ ೨೦೦೮ ರಂದು ಈ ವಾಹಿನಿಯು ಪ್ರಾರಂಭವಾಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 'ಶಂಕರ ಕಿರುತೆರೆ ವಾಹಿನಿಯ ಬಗ್ಗೆ' 2015-12-25 ವೇಬ್ಯಾಕ್ ಮೆಷಿನ್ ನಲ್ಲಿ.